ಧೋನಿ-ಗೌತಮ್ ಗಂಭೀರ್ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ಆಗುತ್ತಿರುತ್ತದೆ. 2011ರ ODI ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ಬಗ್ಗೆ ಗಂಭೀರ್ ನೀಡಿದ್ದ ಹೇಳಿಕೆಗಳು ಇಂದಿಗೂ ಚರ್ಚೆಯ ವಿಷಯ. ನಿನ್ನೆಯ ದಿನ ಇಬ್ಬರು ದಿಗ್ಗಜರ ನಡುವೆ ಅರಳಿದ ಸ್ನೇಹ ಹಳೆಯ ವಿವಾದಗಳೆಲ್ಲಕ್ಕೂ ತೆರೆ ಎಳೆದಿದೆ.
ಕ್ರಿಕೆಟ್ ಜಗತ್ತಿನಲ್ಲಿ ಎಂ.ಎಸ್. ಧೋನಿ ಮತ್ತು ಗೌತಮ್ ಗಂಭೀರ್ ನಡುವಿನ ಬಾಂಧವ್ಯದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಡಿಸಿದ ಆ ಐತಿಹಾಸಿಕ ಸಿಕ್ಸರ್ ಬಗ್ಗೆ ಗಂಭೀರ್ ನೀಡಿದ್ದ ಹೇಳಿಕೆಗಳು ಅಭಿಮಾನಿಗಳ ನಡುವೆ ಇಂದಿಗೂ ಬಿಸಿಬಿಸಿ ಚರ್ಚೆಯ ವಿಷಯ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ (T20 World Cup 2026) ಇಬ್ಬರು ದಿಗ್ಗಜರ ನಡುವೆ ಅರಳಿದ ಸುಂದರ ಸ್ನೇಹ, ಹಳೆಯ ವಿವಾದಗಳೆಲ್ಲಕ್ಕೂ ತೆರೆ ಎಳೆದಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿ, ಐತಿಹಾಸಿಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಸಂಭ್ರಮದ ಬೆನ್ನಲ್ಲೇ, ಸ್ಟೇಡಿಯಂನಲ್ಲೇ ಹಾಜರಿದ್ದ ಎಂ.ಎಸ್. ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮುಖದಲ್ಲಿ ಸದಾ ನಗು ಇರಲಿ ಎಂದು ಧೋನಿ ಬರೆದುಕೊಂಡಿರುವ ಸಾಲುಗಳು ಇದೀಗ ವೈರಲ್ ಆಗುತ್ತಿವೆ.
ಧೋನಿ ಪೋಸ್ಟ್‌ನಲ್ಲೇನಿದೆ?
ವಿಶ್ವಕಪ್ ವಿಜೇತ ಭಾರತ ತಂಡದ ಫೋಟೋವನ್ನು ಹಂಚಿಕೊಂಡಿರುವ ಧೋನಿ, ಹೀಗೆ ಬರೆದುಕೊಂಡಿದ್ದಾರೆ: ‘ಅಹಮದಾಬಾದ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಟೀಮ್ ಇಂಡಿಯಾ ಆಟಗಾರರಿಗೆ, ಸಪೋರ್ಟ್ ಸ್ಟಾಫ್‌ಗೆ ಹಾಗೂ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ದೊಡ್ಡ ಅಭಿನಂದನೆಗಳು. ನೀವೆಲ್ಲರೂ ಆಡಿದ ರೀತಿಯನ್ನು ನೋಡುವುದೇ ಒಂದು ಅದ್ಭುತ ಆನಂದ. ಕೋಚ್ ಸಾಹೇಬ್ರೆ (ಗೌತಮ್ ಗಂಭೀರ್), ನಿಮ್ಮ ಮುಖದಲ್ಲಿ ನಗು ತುಂಬಾ ಚೆನ್ನಾಗಿ ಕಾಣುತ್ತದೆ. ಆ ನಿಮ್ಮ ತೀಕ್ಷ್ಣತೆ (Intensity) ಜೊತೆಗೆ ಮುಖದಲ್ಲಿ ನಗು ಸೇರಿದರೆ ಅದೊಂದು ‘ಕಿಲ್ಲರ್ ಕಾಂಬೊ’. ವೆರಿ ವೆಲ್ ಡನ್. ಎಂಜಾಯ್ ಮಾಡಿ ಗಾಯ್ಸ್. ಇನ್ನು ಬುಮ್ರಾ ಬಗ್ಗೆ ನಾನು ಏನೂ ಬರೆಯದೇ ಇರುವುದೇ ಒಳಿತು… ಆತ ಚಾಂಪಿಯನ್ ಬೌಲರ್ (CHAMPION BOWLER).
