ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ವಿನಯ್ ಗೆ ಕಪಾಳ ಮೋಕ್ಷವಾಗಿದೆ. ವಿನಯ್ ಕೋರ್ಟ್ ನಲ್ಲಿ ಇಂದು ತನ್ನ ಪರ ವಕೀಲ ನಟರಾಜ್ ರನ್ನು ಬದಲಾಯಿಸಿ ಬೇರೊಬ್ಬರನ್ನು ನೇಮಿಸಿಕೊಳ್ಳಲು ಮುಂದಾಗಿದ್ದರು. ಈ ಬಗ್ಗೆ ಜಗಳ ನಡೆದು ವಕೀಲ ನಟರಾಜ್, ಆರೋಪಿ ವಿನಯ್ ಗೆ ಐದಾರು ಭಾರಿ ಕಪಾಳಕ್ಕೆ ಏಟು ನೀಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ವಿನಯ್ ಗೆ ಕಪಾಳ ಮೋಕ್ಷ ಮಾಡಲಾಗಿದೆ. ತನ್ನ ಪರ ವಕೀಲ ನಟರಾಜ್ ಅವರನ್ನು ಬದಲಾಯಿಸಿ, ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಲು ವಿನಯ್ ಮುಂದಾಗಿದ್ದರು. ಈ ವಿಷಯವಾಗಿ ಆರೋಪಿ ವಿನಯ್ ಹಾಗೂ ವಕೀಲ ನಟರಾಜ್ ಮಧ್ಯೆ ಕೋರ್ಟ್ ಕಾರಿಡಾರ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಕೀಲ ನಟರಾಜ್ ಮೇಲೆ ಸ್ಟೋರಿ ಬ್ರೂಕ್ ಮಾಲೀಕನೂ ಆಗಿರುವ ವಿನಯ್ ಕಿರುಚಾಡಿದ್ದಾನೆ. ಇದರಿಂದ ಕೋಪಗೊಂಡ ವಕೀಲ ನಟರಾಜ್, ಕೋರ್ಟ್ ಕಾರಿಡಾರ್ ನಲ್ಲಿ ಆರೋಪಿ ವಿನಯ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಇಂದು ವಿನಯ್ ಪರ ವಕಾಲತ್ತು ವಹಿಸಲು ಹೊಸ ವಕೀಲರೊಬ್ಬರು ಕೋರ್ಟ್ ಗೆ ಬಂದಿದ್ದರು. ಇದು ವಕೀಲ ನಟರಾಜ್ ಅವರ ಕೋಪಕ್ಕೆ ಕಾರಣವಾಗಿತ್ತು. ವಕೀಲ ನಟರಾಜ್ ಅವರು ಎ 10 ಆರೋಪಿ ವಿನಯ್ ಗೆ ಐದಾರು ಭಾರಿ ಕಪಾಳಕ್ಕೆ ಬಾರಿಸಿದ್ದಾರೆ.
